Friday, 19 April 2013
ಮಧುರವಾದ ಸ್ನೇಹ....
ಅವನ ಬಗ್ಗೆ ನಾನು ತಿಳಿದುಕೊಂಡ ಭಾವನೆ ತಪ್ಪು ಎಂದು ಈಗ ಅನ್ನಿಸುತ್ತಿದೆ!
ವರ್ಷದ ಹಿಂದೆ ನನ್ನ ಅವನ ಪರಿಚಯವಾಯಿತು. ಇಬ್ಬರೂ ರೂಮೇಟ್. ಒಂದೇ ಕಪಾಟಿನಲ್ಲಿ ಡ್ರೇಸ್ ಕೂಡಿಸಿಟ್ಟಿದ್ದೇವು. ಒಂದೇ ಹಾಸಿಗೆಯಲ್ಲಿ ಮಲಗುತ್ತಿದ್ದೇವು. ಒಂದೇ ಟೇಬಲ್ಗೆ ಎರಡು ಕುಚರ್ಿ ಹಾಕಿಕೊಂಡು ಓದುತ್ತಿದ್ದೇವು, ಬರೆಯುತ್ತಿದ್ದೇವು. ಜೊತೆಗೆ ಒಂದಿಷ್ಟು ಒಂದೊಳ್ಳೆಳ್ಳೆ ವಿಷಯಗಳ ಬಗ್ಗೆ ಚಚರ್ೆ, ಊಟಕ್ಕೆ ಉಪ್ಪಿನಕಾಯಿಯಂತೆ ಹರಟೆಯನ್ನೂ ಹೊಡೆಯುತ್ತಿದ್ದೇವು. ಈಗ ಆ ದಿನಗಳನ್ನು ನೆನಪಿಸಿಕೊಂಡರೆ ಕ್ಷಣ ಕಾಲ ಎನೂ ತೋಚದಂತಾಗಿ, ಮತ್ತೆ ಆ ದಿನಗಳಿಗಾಗಿ ಕಾಯುವಂತಾಗುತ್ತದೆ. ಆದರೆ ಏನು ಮಾಡುವುದು ಕಳೆದು ಹೋದ ಸಮಯ ಮತ್ತೆ ಬಾರದು ಎಂದು ಸುಮ್ಮನಾಗುತ್ತೇನೆ. ಆದರೂ ನೆನಪು ಅಲೆ ಅಲೆಯಾಗಿ ಹೊರ ಬರುತ್ತಲೆ ಇರುತ್ತದೆ.
ಹೌದು. ನೆನಪುಗಳು ಜೀವನದ ದಿಕ್ಕುಗಳನ್ನೆ ಬದಲಿಸುತ್ತವೆ. ಆ ದಿನಗಳನ್ನು ನೆನಪಿಸಿಕೊಂಡರೆ ಯಾವುದೋ ಆಗಾಧ ಶಕ್ತಿ ಕಳದುಕೊಂಡ ಅನುಭವವಾಗುತ್ತಿದೆ. ತಪ್ಪೋ, ಸರಿಯೋ ಎಂಬುದು ಅಂತರಂಗಕ್ಕೂ ಗೊತ್ತಾಗದ ರೀತಿಯಲ್ಲಿ ನಮ್ಮಿಬ್ಬರ ಸ್ನೇಹ ಆ ರೀತಿಯಲ್ಲಿ ಬೆಳೆದಿತ್ತು. ನಿಜವಾಗಲೂ ನಮ್ಮದು ಅನನ್ಯ ಮಿತ್ರತ್ವ. `ಸಮಾನವಾದ ಗುಣಶೀಲರಲ್ಲಿ ಮಿತ್ರತ್ವ ಶೋಭಿಸುತ್ತದೆ' ಎನ್ನುತ್ತಾರೆ ಮಹಾತ್ಮ ಗಾಂಧಿಜಿಯವರು. ಅವರು ಹೇಳಿದ ಮಾತನ್ನು ಪುಸ್ತಕದಲ್ಲಿ ಓದಿದ್ದೆ. ನಮ್ಮಿಬ್ಬರ ಆತ್ಮೀಯ ಮಧುರ ಭಾವನೆಗಳಿಂದ ನನ್ನ ಜೀವನದಲ್ಲಿ ಅನುಭವಿಸಿದಂತಾಗಿದೆ.
ಇಬ್ಬರ ಮಧ್ಯೆ ಎಷ್ಟೇ ಗಾಢವಾದ ಪ್ರೇಮ, ಸ್ನೇಹ ಇದ್ದರೂ ಆಗಾಗ ಬಿರುಗಾಳಿಯಂತೆ ವೈ ಮನಸ್ಸು ಬರುತ್ತಿರುತ್ತದೆ. ನಮ್ಮ ಸ್ನೇಹದಲ್ಲೂ ಅಂತಹದೊಂದು ಘಟನೆ ನಡೆಯಿತು. ಸಣ್ಣ ಪುಟ್ಟ ವಿಷಯಗಳಿಗೂ ಅವನ ಮನೋಭಾವನೆ ನನಗೆ ಸರಿ ಕಾಣಲಿಲ್ಲ. ಬರ ಬರುತ್ತಾ ಅದು ಹೆಚ್ಚಾಯಿತು. ಅವನ ವರ್ತನೆಯಲ್ಲಿ ಬದಲಾವಣೆಗಳಾದವು. ಇಬ್ಬರ ಮನಸ್ಥಾಪಕ್ಕೂ ಇವೇ ಕಾರಣ. ಅವನು ನನ್ನಲ್ಲಿ ದೋಷಗಳನ್ನು, ನಾನು ಅವನಲ್ಲಿಯ ದೋಷಗಳನ್ನು ದೂಷಿಸಿದೆವು. ಆದರೂ ಆ ದೋಷಗಳನ್ನು ತಿದ್ದಿಕೊಳ್ಳುವ ಹೊತ್ತಿಗೆ ನಮ್ಮಿಬ್ಬರ ಅದ್ಭುತ ಸ್ನೇಹಕ್ಕೊಂದು ಪೂರ್ಣವಿರಾಮ ಬಿತ್ತು.
ಸ್ವಭಾವತಃ ಅವನ ಸ್ವಭಾವವೇ ಹಾಗೆ. ಸ್ವಚ್ಚತೆ ಅಷ್ಟಕಷ್ಟೆ. ರೂಮಿನಲ್ಲಿ ಎಲ್ಲೆಂದರಲ್ಲಿ ವಸ್ತುಗಳನ್ನು ಚಿಕ್ಕಮಕ್ಕಳ ಹಾಗೆ ಚೆಲ್ಲಾಪಿಲ್ಲಿ ಬಿಸಾಕುತ್ತಿದ್ದನು. ಇಂತಹ ಸಣ್ಣ ಪುಟ್ಟ ಕಾರಣಗಳೇ ಅವನೊಡನೆಯ ಸ್ನೇಹದ ಬಿರುಕಿಗೆ ಮೂಲವಾಯಿತು. ಇದು ಹೆಚ್ಚಾಗಲು ತಾಳ್ಮೆ ಇಲ್ಲದಿರುವುದು ಎಂಬ ಅರಿವೂ ನಮ್ಮಿಬ್ಬರಲ್ಲಿ ಬಂತು. ಈಗ ಇಬ್ಬರೂ ಪ್ರತ್ಯೇಕ ರೂಮುಗಳಲ್ಲಿದ್ದೇವೆ. ತಾಳ್ಮೆಯಿಂದ ವತರ್ಿಸುತ್ತಿದ್ದೇವೆ. ಇಬ್ಬರ ಮನಸ್ಥಿತಿ ಒಂದೇ ಅಲ್ಲದಿದ್ದರೂ, ಕೂಡಲೆ ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದೇವೆ.
ನಮ್ಮಲ್ಲಿನ ಗುಣ ಗ್ರಹಿಸುವುದಕ್ಕೆ ತಾಳ್ಮೆ ಬೇಕು. ಅದು ಇಲ್ಲದಿದ್ದರೆ ಯಾರನ್ನು ಸುಧಾರಣೆ ಮಾಡಬೇಕೆಂದು ಬಯಸುತ್ತೆವೆಯೋ ಅವನೊಂದಿಗೆ ಸಂಪೂರ್ಣ ಸಲುಗೆಯಿಂದ ಇರಲಾಗುವುದಿಲ್ಲ. ಗೆಳೆತನದಲ್ಲೂ ಸುಧಾರಣೆ ಆಗುವುದಿಲ್ಲ. ಇಬ್ಬರಲ್ಲೂ ಒಬ್ಬರ ಪ್ರಭಾವ ಮತ್ತೊಬ್ಬರ ಮೇಲೆ ಆಗುವುದು. ಅಂತಹ ಅನುಭವ ಇಬ್ಬರ ಗಮನಕ್ಕೂ ಬಂದಿದುಂಟು.
ಈಗ ಅವನ ಒಡನಾಟದ ಒಂದು ವಸಂತದ ದಿನಗಳ ನೆನಪಾಗುತ್ತಿವೆ. ಬಿಟ್ಟು ಹೋದ ಗೆಳೆಯನ ಬಗ್ಗೆ ಅನಾಥ ಭಾವ ಕಾಡುತ್ತಿದೆ. ಆ ನೆನಪುಗಳು ನನ್ನಲ್ಲಿರುವ ಅಗಾಧ ಸ್ನೇಹಕ್ಕೆ ಇಮ್ಮಡಿಯಾಗುತ್ತಿದೆ. ಜೊತೆಗೆ ಹೃದಯದಲ್ಲಷ್ಟು ಪಶ್ಚಾತಾಪ ಕಳವಳವೂ ಹೆಚ್ಚುತ್ತಿದೆ. ಒಳಗಿನ ಮೌನ ಅಭಿಮಾನದಿಂದ ಅರಳುತ್ತಿದೆ. ಅವನ ಸ್ನೇಹವನ್ನು ಬಿಡೇನು ಎಂದು. ಇಂತಹ ಮೈತ್ರೀಭಾವ ಅಪರೂಪ. ಅದ್ಭುತ ಶಾಂತಿರೂಪವೇ ನಮ್ಮೀ ಸ್ನೇಹ....! ಅರ್ಥ ಮಾಡಿಕೋ.
ಸೃಷ್ಟಿಯಲ್ಲಿ ಅತಿಮಧುರವಾದದ್ದು ಸ್ನೇಹ. ಆ ಸ್ನೇಹ ಮಿತಿಯೊಳಗಿದ್ದರೆ ಸುಂದರ. ಮೀರಿದರೆ ಏರುಪೇರು ಎಂಬ ಪಾಠವಂತೂ ಕಲಿತೆ.
ಒಂದು ನೋಟ ಎರಡು ಮಾತು....
ಅದೇ ಮೊದಲು. ಅಷ್ಟು ದೀರ್ಘವಾಗಿ ನೋಡುತ್ತಿರುವುದು. ಅದೇನೋ ಆಕರ್ಷಣೆ ಅವಳ ನೋಟದಲ್ಲಿತ್ತು. ಈ ಮೊದಲು ಕ್ಯಾಂಪಸ್ನಲ್ಲಿ ಎಲ್ಲಿಯೂ ನೋಡಿದ ನೆನಪಿಲ್ಲ. ಕ್ಯಾಂಪಸ್ಗೆ ಹೊಸಬಳಾ ಅಥವಾ ಅವಳಾ?
ಹೌದು, ಅದು ನಾನು ಡಿಗ್ರಿ ಓದುತ್ತಿದ್ದ ಸಮಯ. ಎಲ್ಲರಂತೆ ನಾನು ಕಾಲೇಜಿಗೆ ರೆಗ್ಯೂಲರ್ ವಿದ್ಯಾಥರ್ಿ. ನಮ್ಮ ಕಾಲೇಜಿಗೆ ಹೋಗಲು ಎರಡು ಬಸ್ಗಳನ್ನು ಬದಲಾಯಿಸಬೇಕಿತ್ತು. ಅದು ಫೆ.14 ನೇ ತಾರೀಖು. ಪ್ರೇಮಿಗಳ ದಿನ ಬೇರೆ! ಅಂದು ನಾನು ಎಂದಿನಂತೆ ನಿತ್ಯಕರ್ಮಗಳನ್ನು ಮುಗಿಸಿ ಬಸ್ ಸ್ಟಾಪ್ಗೆ ನಡೆದೆ. ಬಸ್ ಬರುವುದು ಸ್ವಲ್ಪ ತಡವಾಯಿತು. ಹಾಗೇ ಬಸ್ಸ್ಟಾಪ್ ಕ್ಯಾಂಟೀನ್ಗೆ ಹೋಗಿ ಟೀ ಕುಡಿದು ಪ್ಲಾಟ್ಫಾಮರ್್ನಲ್ಲಿ ಕುಳಿತೆ. ಆಗ ಒಬ್ಬ ಸುಂದರ ಹುಡುಗಿ ಬೈಕ್ ಮೇಲೆ ಬಂದು ಪಕ್ಕದಲ್ಲೇ ಕುಳಿತಳು. ಏಕೋ ಅವಳನ್ನು ಪದೇಪದೆ ನೋಡಬೇಕೆನಿಸಿತು. 'ಲವ್ ಅಟ್ ಫಸ್ಟ್ ಸೈಟ್' ಎಂದು ಸ್ನೇಹಿತರು ಹೇಳಿದ್ದು ನೆನಪಾಯಿತು.
ಅವಳು ನನ್ನನ್ನೆ ದಿಟ್ಟಿಸಿ ನೋಡುತ್ತಿದ್ದಳು. ಖಚಿತಪಡಿಸಿಕೊಳ್ಳಲು ಹಿಂದೆ, ಮುಂದೆ ಗಮನಿಸಿದೆ. ಅಲ್ಲಿ ಇದ್ದದ್ದು ಇಬ್ಬರೆ. ನಾನು ಮತ್ತು ಅವಳು. ಇಬ್ಬರಲ್ಲೂ ಎಂಥದೋ ತವಕ. ಕೆಲ ಸಮಯ ನಮ್ಮನ್ನೆ ಮರೆತ ಅನುಭವ. ನನ್ನಲ್ಲಿ ಕಾತುರ. ಅವಳಲ್ಲಿ ನಾಚಿಕೆ. ಇಬ್ಬರು ಮೂಕವಿಸ್ಮಿತರಾಗಿ ಹಾಗೆ ನಿಂತೆವು. ಅಷ್ಟರಲೇ ಅವಳು ಕಾಯುತ್ತಿದ್ದ ಸವಾರಿ ಬಂದಿತು. ಹೊರಟಳು. ನಾನು ನೋಡುತ್ತಲೇ ಇದ್ದೆ. ಅವಳು ಕಿಟಕಿಯಿಂದ ಮುಖ ಹೊರ ಹೊರಚಾಚಿ ನಕ್ಕಳು! ನನ್ನ ಮುಖವು ಅರಿಳಿತು. ಕೈ ಹೇಳಲೋ ಬೇಡವೋ ಎನ್ನುತ್ತ ಟಾಟಾ ಮಾಡಿತ್ತು.
ಆ ದಿನದಿಂದ ಬಿಡದೆ ಅವಳ ನಗು ಕಾಡತೊಡಗಿತು. ಕಾರಣ ತಿಳಿಯುವ ಮೊದಲೇ ನಾ ಕಳೆದು ಹೋಗಿದ್ದೆ. ಮನಸ್ಸಿಗೆ ಮಾತ್ರ ಸಮಾಧಾನವಿರಲಿಲ್ಲ. ಆ ನಗುವಿಗೆ ರಾತ್ರಿಯಲ್ಲ ಚಡಪಡಿಸಿದೆ. ಮರುದಿನ ಪ್ರಾರಂಭವಾಯಿತು ನೋಡಿ ಹುಡುಕುವ ಅಭಿಯಾನ. ಮತ್ತದೇ ಸಮಯಕ್ಕೆ ಅಲ್ಲಿಯೇ ಕಾಯುತ್ತಿದ್ದೆ. ಮನಸ್ಸಿನ ಭಾವನೆಗಳು ಅಥರ್ೈಸಿದವೋ ಏನೋ. ಅವಳು ಅಲ್ಲಿ ಪ್ರತ್ಯಕ್ಷಳಾದಳು. ಏನಾದರಾಗಲಿ ಅಂದು ಮಾತನಾಡಿಸಿಯೇ ತಿರಬೇಕೆಂದು ನಿರ್ಧರಿಸಿದೆ. ಆದರೆ, ಭಯ ಮಾತ್ರ ತಡೆಯುತ್ತಿತ್ತು. ಮತ್ತದೇ ದೂರದ ನೋಟ, ನಗು. 'ಮೌನವೇ ಪ್ರೀತಿಗೆ ಸಮ್ಮತಿ' ಎಂದು ನಾನು ನಂಬಿದ್ದೆ. ಅವಳು ನಿಂತಿದ್ದಾಳೆ. ನಾನು ನೋಡತ್ತಿದ್ದೇನೆ. ನೋಡುವುದು ಮಾತ್ರ ಮುಂದುವರಿದಿತ್ತು.
ಅವಳು ರಾತ್ರಿಯಲ್ಲಾ ನೆನಪಾದಳು. ಅವಳಿಗೆ ನನ್ನ ಮೇಲೆ ಪ್ರೀತಿನಾ? ಸ್ನೇಹನಾ? ಎಂಬ ಹುಚ್ಚು ಆಲೋಚನೆ ನಿದ್ದೆಗೆಡಸಿತು. ಅವಳು ಪದೇ ಪದೇ ನನ್ನನ್ನೆ ನೋಡುವುದು, ಅದೇ ಸ್ಥಳದಲ್ಲಿ ನಿಲ್ಲುವುದು, ಕಾಯುವುದು, ಯಾಕೆ? ಯೋಚಿಸಿದೆ. ಅವಳಿಗೆ ಮಾತನಾಡಲು ಮುಜಗರವೇ. ಇಲ್ಲಾ ನಾನೇ ಮಾತನಾಡಿಸಲಿ ಎಂಬ ಅಭಿಲಾಷೆಯೆ. ಇರಬಹುದು. ನಾನೂ ಮಾತನಾಡಿಸದೇ ತಪ್ಪು ಮಾಡುತ್ತಿರುವೆ. ಮತ್ತೆ ಅದೇ ಸ್ಥಳಕ್ಕೆ ಹೋಗಿ ಕಾಯಬೇಕೆನಸಿತು. ಅಲ್ಲೇ ನಿಂತೆ. ಮಾತನಾಡಿಸಲೇಬೇಕು ಎಂಬ ಕಾತರದಲ್ಲಿ.
ಅವಳು ಬಂದಳು. ನಾನು ಪರಿಚಯಕ್ಕೆ ಮುಂದಾದೆ. ಅಭಿಮಾನ ನಿರಾಕರಿಸಿತು. ಇಬ್ಬರಲ್ಲೂ ಸಣ್ಣ ಅಹಂಕಾರ ಮತ್ತು ತೃಪ್ತಿಭಾವ. ಅದು ಮಾತಿನಲ್ಲಲ್ಲ. ನೋಟದಲ್ಲಿ. ಅಂತರಂಗದಿ ಹೇಳಬೇಕೆಂದು ಸೋತಿದ್ದು, ಅದೇ ಮೊದಲು. ಅದೇ ಕೊನೆ. ಆಗೀನಿಂದಲೇ ನಮ್ಮಿಬ್ಬರಲ್ಲಿ ಆತ್ಮೀಯತೆ ಆರಂಭವಾಗಿತ್ತು. ಆದರೆ, ಮಾತು ಹೊರ ಹೊಮ್ಮಲೇ ಇಲ್ಲ. ಯಾವುದೋ ಕಾಲದ ಸೆಳತಕ್ಕೆ ಒಳಗಾಗಿ ಪರಿಚಯದ ಸಮಯವನ್ನು ವ್ಯರ್ಥ ಮಾಡಿದೆ. ಅಂದಿನಿಂದ ಅವಳು ಕಾಣಿಸಲೇ ಇಲ್ಲ.
ಆದರೆ, ಅವಳೀಗ ಮತ್ತೆ ಕ್ಯಾಂಪಸ್ನಲ್ಲಿ ಕಾಣಿಸಿದ್ದಾಳೆ. ಬಹುದಿನಗಳ ಹಿಂದೆ ಮಿಂಚಿ ಮರೆಯಾದವಳು. ಈಗ ಮನಸ್ಸು ಮತ್ತೆ ಹಳೆಯ ನೆನಪುಗಳನ್ನು ಕೆದಕುತ್ತಿದೆ. ಹೇಗೆ ಮಾತು ಪ್ರಾರಂಭಿಸುವದು ತಿಳಿಯುತ್ತಿಲ್ಲ. ನನ್ನ ಹಾಗೆ ಅವಳಿಗೂ ಅನ್ನಿಸಿರಬಹುದೆ ಎಂಬ ಯೋಚನೆ. ಹೌದು ಈ ಹರೆಯವೇ ಹೀಗೆ. ಮಾಡಬೇಕಾದ ಸಮಯದಲ್ಲಿ ಮಾಡದೇ, ಹೇಳಬೇಕಾದದ್ದನ್ನು ಹೇಳದೆ ಕಳೆದುಕೊಂಡು ಪಶ್ಚಾತಾಪ ಪಡುತ್ತೇವೆ. ನಂತರ ದುರಂತ ಕಥೆಯ ನಾಯಕನಂತೆ ನಮ್ಮ ಪಾಡಾಗುತ್ತದೆ.
ಈಗಲಾದರೂ, ಅವಳಿಂದ ಒಂದೇ ಒಂದು ನೋಟ, ಎರಡೇ ಎರಡು ಮಾತು ಬಯಸಿರುವೆ. ಅವಳು ಬರುವ ನಿರೀಕ್ಷೆಯಲ್ಲಿ ಕ್ಯಾಂಪಸ್ನ ಅದೇ ಸ್ಥಳದಲ್ಲಿ ಕಾಯುತ್ತಿರುವೆ. ಫ್ರೆಂಡ್ಸ್ ನೀವೂ ಅಷ್ಟೆ ಯಾರ ಬಗ್ಗೆ ಏನಾದರೂ ಹೇಳಬೇಕೆನಿಸಿದರೆ ನೇರವಾಗಿ ಹೇಳಿಬಿಡಿ. ಅದು ತಪ್ಪೋ ಸರಿಯೋ ಬೇರೆ ಮಾತು. ಆಗ ಕಷ್ಟವೆನಿಸಿದರು ಮುಂದೆ ನೆಮ್ಮದಿಯಂತೂ ಸಿಗುತ್ತದೆ.
Subscribe to:
Posts (Atom)