Thursday, 27 June 2013


ಅವನು ನಮ್ಮೊಂದಿಗಿಲ್ಲ ಕಣ್ಣೀರು ನಿಂತಿಲ್ಲ...


ಆತ ಜರ್ನಲಿಸ್ಟ್ ಆಗಬೇಕು ಅನ್ನೋ ಆಸೆ ಹೊಂದಿದ್ದ. ಗುಲ್ಬಗರ್ಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗಕ್ಕೆ ಸೇರಿದ್ದ. ಸಮೂಹ ಮಾಧ್ಯಮ ಲೋಕದಲ್ಲಿನ ನೂರಾರು ಕನಸುಗಳನ್ನು ಕಂಡಿದ್ದ. ಇದಕ್ಕಾಗಿ ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದ. ಪಾದರಸದಂತಿದ್ದ.  ತನ್ನ ಗೆಳೆಯರೊಂದಿಗೆ  ಉಪನ್ಯಾಸಕರಿಗೆ ಬಹಳ ಆತ್ಮೀಯನಾಗಿದ್ದ.
ಆತ ಮಿತ ಮಾತುಗಾರ. ಯಾರ ಜೊತೆಗೂ ಹೆಚ್ಚಾಗಿ ಮಾತನಾಡಿದವನಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ, ಸುಖಿಯಂತಿದ್ದ. ದಿನಗಳು ಉರಿಳಿದವು. ವರ್ಷವಾಯಿತು. ಈತ ದ್ವಿತೀಯ ವರ್ಷಕ್ಕೆ ಕಾಲಿಟ್ಟ. ವಿಶ್ವವಿದ್ಯಾಲಯಕ್ಕೆ ತನ್ನಂತೆ ಪತ್ರಿಕೋದ್ಯಮದಲ್ಲಿ ಹಲವಾರು ಆಸೆಗಳನ್ನು ಇಟ್ಟುಕೊಂಡ ಬಂದ ವಿದ್ಯಾಥರ್ಿಗಳಿಗೆ ಸ್ವಾಗತ ಕಾರ್ಯಕ್ರಮ ಇಟ್ಟುಕೊಂಡೆವು. ಅದರ ನೇತೃತ್ವ ವಹಿಸಿಕೊಂಡವನು ಆತನೆ. ನಾವು ಮಾಡಬೇಕಾದ ಕಾರ್ಯಗಳನ್ನೆಲ್ಲ ಅವನೊಬ್ಬನೆ ಮಾಡಿದ. ನಾವು ಕೇವಲ ಪ್ರೇಕ್ಷಕ ಗೊಂಬೆಯಾಗಿದ್ದೆವು. ಆ ಕಡೆಗೂ, ಈ ಕಡೆಗೂ ಅವನೆ. ತುಂಬಾ ಉತ್ಸಾಹದಿಂದ ಓಡಾಡಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ. ಅವನು ಅಷ್ಟೆಲ್ಲ ಮಾಡಿದ್ದು ನೋಡಿ ಆಶ್ಚರ್ಯವಾಗಿತ್ತು. ಸಂತೋಷಕ್ಕಾಗಿ, ಕಾರ್ಯಕ್ರಮದ ನೆನಪಿಗಾಗಿ ಅವನೊಂದಿಗೆ ಎಲ್ಲರೂ ಫೊಟೋ ತೆಗೆಸಿಕೊಂಡು ಮನೆಗೆ, ಹಾಸ್ಟೆಲ್ಗಳಿಗೆ ಹಿಂದಿರುಗಿದೆವು.
ಅಂದೇ ಸಂಜೆ ಆತನ ಊರಿನ ಮನೆಯಿಂದ ಕಾಲ್ ಬಂದಿತು. ರಿಸೀವ್ ಮಾಡಿ ಮಾತನಾಡಿದಾಗ 'ಅಜ್ಜನಿಗೆ ಆರಾಮ ಇಲ್ಲ. ಸೀರಿಯಸ್ಸ್ ಬೇಗನೇ ಬಾ' ಎಂದು ತಂಗಿ ಹೇಳಿದಳು. ಇದರಿಂದ ಕೊಂಚ ವಿಚಲಿತನಂತೆ ಕಂಡ ಅವನು ಆ ರಾತ್ರಿನೇ ಹೊರಡಬೇಕೆಂದ. ರಾತ್ರಿ ಬೇಡ ಬೆಳಿಗ್ಗೆ ಹೋಗು ಎಂಬ ಗೆಳೆಯರ ಸಲಹೆಯಂತೆ ಮಾರನೆ ದಿನ ಬೆಳಿಗ್ಗೆ ಐದು ಗಂಟೆಗೆ ತನ್ನ ಸ್ವಂತ ಬೈಕನ್ನೇರಿ ಊರಿಗೆ ಹೋದ. ವಿಶ್ವವಿದ್ಯಾಲಯದಿಂದ ನೂರು ಕಿ.ಮೀ. ಮುಂದೆ ಸಾಗಿದ್ದ. ಆದರೆ ಯಾರು ಊಹಿಸಲಾಗದಂತ ಘಟನೆ ಸಂಭವಿಸಿತ್ತು. ಖಾಸಗಿ ಬಸ್ ಮತ್ತು ಅವನ ಬೈಕ್ ನಡುವೆ ಅಪಘಾತದಿಂದಾಗಿ ವಿಧಿಯ ಆಟಕ್ಕೆ ಅವನು ಬಲಿಯಾದ.
ಈ ವಿಷಯ ಗೊತ್ತಾದ ಗೆಳೆಯರಿಗೆ, ಉಪನ್ಯಾಸಕರಿಗೆ ಒಮ್ಮೇಲೇ ಶಾಕ್! ನಿನ್ನೆ ನಮ್ಮ ಜೊತೆಗೆ ಓಡಾಡಿಕೊಂಡಿದ್ದ. ಇವತ್ತು ಹೀಗೆಲ್ಲ ಎಂದರೆ, ನಂಬಲಾಗಲಿಲ್ಲ. ಆದರೂ ಅದು ನಿಜವಾಗಿತ್ತು. ನಮ್ಮ ಆತ್ಮೀಯ ಸ್ನೇಹಿತ ನಮ್ಮನ್ನಗಲಿದ್ದ. ಎಲ್ಲೆಲ್ಲಿಂದಲೋ ಬಂದವರು. ಒಂದು ವರ್ಷದಲ್ಲಿ ಅದೆಷ್ಟೋ ಅನ್ಯೋನ್ಯ ಮಿತ್ರತ್ವ ಬೆಳೆದಿತ್ತು. ಆ ದುರಂತ ಸಾವು ನಮ್ಮ ಮನಸ್ಸಿನಲ್ಲಿ ಹಚ್ಚಳಿಯದೆ ಉಳಿದಿದೆ. ಒಬ್ಬ ಉತ್ತಮ ಗೆಳೆಯನ ಕಳೆದುಕೊಂಡ ಅನಾಥ ಪ್ರಜ್ಞೆ ನಮ್ಮನ್ನು ಕಾಡುತ್ತಿದೆ. ಆತನ ನಡೆ-ನುಡಿ, ಪ್ರೀತಿ- ವಿಶ್ವಾಸ, ಸ್ನೇಹ ಸಲುಗೆ ನಮ್ಮೊಂದಿಗೆ ಇನ್ನೂ ಜೀವಂತವಾಗಿವೆ.
ನೀನು ನಮ್ಮೊಂದಿಗೆ ಇಲ್ಲದಿದ್ದರೂ, ಆ ದಿನಗಳೆ ಮಾತ್ರ ನೆನಪಾಗಿವೆ ಗೆಳೆಯ ದೊಡ್ಡಬಸಪ್ಪ. ನಿನಗೆ ಪ್ರೀತಿಯ ನಮನಗಳು 

ದೇವರ ಕಾಣುವ ಹುಚ್ಚು ಮತ್ತು ಆ ರಾತ್ರಿ...



  ಆಗ ನಾವ್ ಇನ್ನು 16 ಪೋರರು. ಮುಖದ ಮೇಲೆ ಮೀಸೆ ಮೂಡಲು ಆರಂಭಿಸಿದ್ದವು. ನಾವ್ ನಾಲ್ಕ ಜನ ಫ್ರೇಂಡ್ಸ್. ಓಣಿಯ ತುಂಬೆಲ್ಲ ಉಡಾಳ ಕಂಪನಿ ಎನ್ನುತ್ತಿದ್ದರು. ನಮ್ಮೂಗಳ ಕಿತಾಪತಿಗಳಿಗೂ ಕೊನೆಯೇ ಇರಲಿಲ್ಲ. ಕೆಲವೊಂದು ಸಾರಿ ಕುತೂಹಲದ ಸಂಗತಿಗಳನ್ನು ಬೇಧಿಸಲು ಪ್ರಯತ್ನಸಿದ್ದು ಉಂಟು. ಅಂತಹ ಪ್ರಯತ್ನಗಳಿಂದ ಮೈ ತುಂಬಾ ಬಾಸುಂಡೆ ಬರುವ ಹಾಗೆ ತದಕಿಸಿಕೊಂಡಿದ್ದು ಇದೆ. ಅವುಗಳಲ್ಲೊಂದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
 ನಮ್ಮ ಹಳ್ಳಿ ಮನೆಗಳೆಂದರೆ ಅಷ್ಟಕಷ್ಟೆ. ಇತ್ತ ತೀರ ದೊಡ್ಡದು ಅಲ್ಲದ, ತೀರ ಸಣ್ಣದು ಅಲ್ಲದ ಮನೆಗಳು. ಅದರಲ್ಲೂ ನಮ್ಮ ಓಣಿಯಲ್ಲಿರುವಂತಹ ಪ್ರತಿ ಮನೆಗಳು ಚಿಕ್ಕವು. ಆದ್ದರಿಂದ ಗಂಡಸರೆಲ್ಲರೂ ಮಲಗಲು ಹೆಚ್ಚಾಗಿ ಗುಡಿಗಳನ್ನೆ ಅವಲಂಭಿಸಿದ್ದರು. ಹಾಗೆಯೇ ನಾವು ಸ್ವಲ್ಪ ವಯಸ್ಸಿಗೆ ಬಂದ ನಂತರ ಗುಡಿಗೆ ಮಲಗಲು ಹೋಗುತ್ತಿದ್ದೆವು. ನಮ್ದು ನಾಲ್ಕು ಜನರ ಗುಂಪ್ಪು. ಎಲ್ಲರೂ ಒಂದೆ ಕಡೆ ಮಲಗುತ್ತಿದ್ದೆವು. ನಾವು  ಮಲಗಲು ಹೋಗುತ್ತಿದ್ದದ್ದು ಬಸವೇಶ್ವರ ಗುಡಿಗೆ. ಅದು ನಮ್ಮೂರಿನ ಫೇಮಸ್ ದೇವರುಗಳಲ್ಲಿ ಒಂದು.
  ಆದರೆ, ಈ ದೇವರ ಬಗ್ಗೆ ಒಂದು ವಿಚಿತ್ರ ಸುದ್ದಿ ಹರಡಿತ್ತು. ಅದೇನಂದರೆ: ಬಸವೇಶ್ವರ ಸತ್ತುಳ್ಳವ. ಅವಾ ರಾತ್ರಿಯಲ್ಲ ಕಾಲಿಗೆ ಗೆಜ್ಜೆ ಕಟಗೊಂಡು, ನಮ್ಮ ಓಣಿ ಮತ್ತು ಊರನ್ನು ಕಾಯ್ತಾನೆ. ಎಂದು ಆಗಾಗ ಜನ ಆಡಿಕೊಳ್ಳತ್ತಿದ್ದರು. ನಾವು ಅದನ್ನು  ಕನ್ಫಮರ್್ಗಾಗಿ ಅಜ್ಜಿಯನ್ನು ಕೇಳಿದೆವು. ಅವಳು ನಿಜ ಎಂದಳು. ಆಗ ನಮ್ಮಲ್ಲಿ ಇನ್ನು ಕುತೂಹಲ ಹೆಚ್ಚಾಯಿತು.
 ಎಲ್ಲರೂ ಮಾತನಾಡಿಕೊಂಡೆವು. ಬಸವಣ್ಣ ದೇವ್ರು ಹೇಗಿದ್ದಾನೆ ಎಂಬುದು ಈ ರಾತ್ರಿ ನೋಡುವುದೆ ಎಂದು. ರಾತ್ರಿಯಲ್ಲ ಎಚ್ಚರ ಇರಬೇಕೆಂದು, ಹಗಲೆಲ್ಲ ನಿದ್ದೆ ಮಾಡಿದೆವು. ವಿಚಾರ ಮಾಡಿದೆವು. ದೇವ್ರು ಅಂದ್ರೇ ಹೇಗಿರ್ತಾನೆ. ಅವನು ಊರು ಕಾಯುವುದು ಅಂದ್ರೆ ಏನು. ಅವನೇನ ಕೈಯಲ್ಲಿ ಸ್ಟೀಕ್ ಹಿಡಿದಿರ್ತಾನಾ! ಅಥವಾ ಗೂಖರ್ಾ ತರ ಡ್ರೇಸ್ ಮತ್ತು ವ್ಹಿಜಿಲ್ ಹೊಡೆಯುತ್ತಾ ಬರ್ತಾನಾ! ಎಂಬ ಮುಂತಾದ ಪ್ರಶ್ನೆಗಳು ತಲೆಯಲ್ಲಿ ಗಿರಿಕಿ ಹೊಡೆಯತೊಡಗಿದವು. ಇವಕ್ಕೆಲ್ಲ ಉತ್ತರ ಬೇಕು ಅಂದ್ರೆ ನಾವ್ ಇವತ್ತು ದೇವ್ರು ಅದ್ಹೇಗೆ ಹೊರಗಡೆ ಹೋಗ್ತಾನೆ ನೋಡಲೇಬೇಕೆಂದು ನಿರ್ಧರಿಸಿದೆವು.
 ರಾತ್ರಿ 11ಗಂಟೆಗೆ ನಮ್ಮ ಕಾರ್ಯಚರಣೆ ಆರಂಭವಾಯಿತು. ಗುಡಿಯಲೆಲ್ಲ ಜನ ಮಲಗಿದ್ದರು. ನಾವ್ ನಾಲ್ಕು ಜನ ನಾಲ್ಕು ದಿಕ್ಕಿನ ಮರೆಗೆ ಕುಳಿತ್ತಿದ್ದೆವು. ನಮ್ಮಜ್ಜಿ ಹೇಳಿದ್ದು ನೆನಪಾಯಿತು. ಮಧ್ಯರಾತ್ರಿ 12ಗಂಟೆ ನಂತರ ಬರ್ತಾನೆ ಎಂದು. 12ಗಂಟೆ ಆಯಿತು. ನೋಡುವ ಹಂಬಲ ಹೆಚ್ಚಾಯಿತು. ಸಮಯ ಸರಿಯುತ್ತಲೇ ಇತ್ತು. ದೇವ್ರು ಆಗ ಬರ್ತಾನೆ. ಈಗ ಬರ್ತಾನೆ ಅಂತ ಕಾಯ್ದು ಸುಸ್ತಾಯಿತು. ಬರಲೇ ಇಲ್ಲ.
 ಪೂತರ್ಿ ನಿಶ್ಯಬ್ದ ಆವರಿಸಿತ್ತು. ಕರೆಂಟ್ ಬೇರೆ ಹೋಗಿತ್ತು. ನಾನು ಸ್ವಲ್ಪ ಕೀಟ್ಲೆ ಮಾಡಲೆಂದು ವಿಚಿತ್ರವಾಗಿ ಅರಿಚಿದೆ. ಉಳಿದ ಮೂವರ ಜಂಗಾಬಲವೇ ಕುಸಿಯಿತು. ಅವರು ಭಯಪಟ್ಟಿದ್ದು ನೋಡಿ, ಮತ್ತಷ್ಟು ಸಂತೋಷವಾಯಿತು. ಅದೇ ಖುಷಿಯಲ್ಲಿಯೇ ಇಡೀ ಓಣಿಗೆ ಕೇಳುವ ಹಾಗೆ ಕಿಟಾರನೆ ಚೀರಿದೆ. ಗುಡಿಯಲ್ಲಿ ಮಲಗಿದ್ದ ಜನರೆಲ್ಲ ಎದ್ದು ಕುಳಿತರು. ಏನದು ಶಬ್ದ ಎಂದು ಒಬ್ಬರಿಗೊಬ್ಬರು ಕೇಳತೊಡಗಿದರು. ಆದರೆ, ನಾ ಚೀರಿದ ಶಬ್ದಕ್ಕೆ ಇನ್ನೊಂದು ಮೂಲೆಯಲ್ಲಿದ್ದ ಗೆಳೆಯನಿಗೆ ಚಡ್ಡಿಯಲ್ಲಿಯೇ ಒಂದು ಎರಡು ಆಗಿತ್ತು. ಇದನ್ನ ಕಂಡ ಅಲ್ಲಿಯವರು ಅವನ ಪರಸ್ಥಿತಿ ನೋಡಿ ವಿಚಾರಿಸಿದರು. ಅವನು ನಾವು ಮಾಡ ಹೊರಟಿದ್ದ ಕಾರ್ಯಚರಣೆಯನ್ನೆಲ್ಲ ಅವರಿಗೆ ಹೇಳಿದನು. ಅವರು, ನಾವು ದೇವ್ರನ್ನು ಕಾಣಬೇಕೆಂಬ ಹುಚ್ಚು ಹಟಕ್ಕೆ ಎರಡೆರಡು ಏಟು ಹೊಡೆದರು. ದೇವ್ರು ಯಾರ ಕಣ್ಣಿಗೂ ಕಾಣಿಸೊಲ್ಲ ಎಂದು ಬಯ್ದರು. ದೇವ್ರನ್ನು ನೋಡಬೇಕೆಂಬ ನಮ್ಮ ಹುಚ್ಚು ಕಲ್ಪನೆಗೆ ಫುಲ್ಸ್ಟಾಪ್ ಹಾಕಿ ಕಂಬಳಿ ಹೊದ್ದು ಮಲಗಿಕೊಂಡೆವು.