Friday, 19 April 2013


ಒಂದು ನೋಟ ಎರಡು ಮಾತು....


  ಅದೇ ಮೊದಲು. ಅಷ್ಟು ದೀರ್ಘವಾಗಿ ನೋಡುತ್ತಿರುವುದು. ಅದೇನೋ ಆಕರ್ಷಣೆ ಅವಳ ನೋಟದಲ್ಲಿತ್ತು. ಈ ಮೊದಲು ಕ್ಯಾಂಪಸ್ನಲ್ಲಿ ಎಲ್ಲಿಯೂ ನೋಡಿದ ನೆನಪಿಲ್ಲ. ಕ್ಯಾಂಪಸ್ಗೆ ಹೊಸಬಳಾ ಅಥವಾ ಅವಳಾ?        

 ಹೌದು, ಅದು ನಾನು ಡಿಗ್ರಿ ಓದುತ್ತಿದ್ದ ಸಮಯ. ಎಲ್ಲರಂತೆ ನಾನು ಕಾಲೇಜಿಗೆ ರೆಗ್ಯೂಲರ್ ವಿದ್ಯಾಥರ್ಿ. ನಮ್ಮ ಕಾಲೇಜಿಗೆ ಹೋಗಲು ಎರಡು ಬಸ್ಗಳನ್ನು ಬದಲಾಯಿಸಬೇಕಿತ್ತು. ಅದು ಫೆ.14 ನೇ ತಾರೀಖು. ಪ್ರೇಮಿಗಳ ದಿನ ಬೇರೆ! ಅಂದು ನಾನು ಎಂದಿನಂತೆ ನಿತ್ಯಕರ್ಮಗಳನ್ನು ಮುಗಿಸಿ ಬಸ್ ಸ್ಟಾಪ್ಗೆ ನಡೆದೆ. ಬಸ್ ಬರುವುದು ಸ್ವಲ್ಪ ತಡವಾಯಿತು. ಹಾಗೇ ಬಸ್ಸ್ಟಾಪ್ ಕ್ಯಾಂಟೀನ್ಗೆ ಹೋಗಿ ಟೀ ಕುಡಿದು ಪ್ಲಾಟ್ಫಾಮರ್್ನಲ್ಲಿ ಕುಳಿತೆ. ಆಗ ಒಬ್ಬ ಸುಂದರ ಹುಡುಗಿ ಬೈಕ್ ಮೇಲೆ ಬಂದು ಪಕ್ಕದಲ್ಲೇ ಕುಳಿತಳು. ಏಕೋ ಅವಳನ್ನು ಪದೇಪದೆ ನೋಡಬೇಕೆನಿಸಿತು. 'ಲವ್ ಅಟ್ ಫಸ್ಟ್ ಸೈಟ್' ಎಂದು ಸ್ನೇಹಿತರು ಹೇಳಿದ್ದು ನೆನಪಾಯಿತು.
  ಅವಳು ನನ್ನನ್ನೆ ದಿಟ್ಟಿಸಿ ನೋಡುತ್ತಿದ್ದಳು. ಖಚಿತಪಡಿಸಿಕೊಳ್ಳಲು ಹಿಂದೆ, ಮುಂದೆ ಗಮನಿಸಿದೆ. ಅಲ್ಲಿ ಇದ್ದದ್ದು ಇಬ್ಬರೆ. ನಾನು ಮತ್ತು ಅವಳು. ಇಬ್ಬರಲ್ಲೂ ಎಂಥದೋ ತವಕ. ಕೆಲ ಸಮಯ ನಮ್ಮನ್ನೆ ಮರೆತ ಅನುಭವ. ನನ್ನಲ್ಲಿ ಕಾತುರ. ಅವಳಲ್ಲಿ ನಾಚಿಕೆ. ಇಬ್ಬರು ಮೂಕವಿಸ್ಮಿತರಾಗಿ  ಹಾಗೆ ನಿಂತೆವು. ಅಷ್ಟರಲೇ ಅವಳು ಕಾಯುತ್ತಿದ್ದ ಸವಾರಿ ಬಂದಿತು. ಹೊರಟಳು. ನಾನು ನೋಡುತ್ತಲೇ ಇದ್ದೆ.  ಅವಳು ಕಿಟಕಿಯಿಂದ ಮುಖ ಹೊರ ಹೊರಚಾಚಿ ನಕ್ಕಳು! ನನ್ನ ಮುಖವು ಅರಿಳಿತು. ಕೈ ಹೇಳಲೋ ಬೇಡವೋ ಎನ್ನುತ್ತ ಟಾಟಾ ಮಾಡಿತ್ತು.

ಆ ದಿನದಿಂದ ಬಿಡದೆ ಅವಳ ನಗು ಕಾಡತೊಡಗಿತು. ಕಾರಣ ತಿಳಿಯುವ ಮೊದಲೇ ನಾ ಕಳೆದು ಹೋಗಿದ್ದೆ. ಮನಸ್ಸಿಗೆ ಮಾತ್ರ ಸಮಾಧಾನವಿರಲಿಲ್ಲ. ಆ ನಗುವಿಗೆ ರಾತ್ರಿಯಲ್ಲ ಚಡಪಡಿಸಿದೆ. ಮರುದಿನ ಪ್ರಾರಂಭವಾಯಿತು ನೋಡಿ ಹುಡುಕುವ ಅಭಿಯಾನ. ಮತ್ತದೇ ಸಮಯಕ್ಕೆ ಅಲ್ಲಿಯೇ ಕಾಯುತ್ತಿದ್ದೆ. ಮನಸ್ಸಿನ ಭಾವನೆಗಳು ಅಥರ್ೈಸಿದವೋ ಏನೋ. ಅವಳು ಅಲ್ಲಿ ಪ್ರತ್ಯಕ್ಷಳಾದಳು.  ಏನಾದರಾಗಲಿ ಅಂದು ಮಾತನಾಡಿಸಿಯೇ ತಿರಬೇಕೆಂದು ನಿರ್ಧರಿಸಿದೆ. ಆದರೆ, ಭಯ ಮಾತ್ರ ತಡೆಯುತ್ತಿತ್ತು. ಮತ್ತದೇ ದೂರದ ನೋಟ, ನಗು. 'ಮೌನವೇ ಪ್ರೀತಿಗೆ ಸಮ್ಮತಿ' ಎಂದು ನಾನು ನಂಬಿದ್ದೆ. ಅವಳು ನಿಂತಿದ್ದಾಳೆ. ನಾನು ನೋಡತ್ತಿದ್ದೇನೆ. ನೋಡುವುದು ಮಾತ್ರ ಮುಂದುವರಿದಿತ್ತು.

  ಅವಳು ರಾತ್ರಿಯಲ್ಲಾ ನೆನಪಾದಳು. ಅವಳಿಗೆ ನನ್ನ ಮೇಲೆ ಪ್ರೀತಿನಾ? ಸ್ನೇಹನಾ? ಎಂಬ ಹುಚ್ಚು ಆಲೋಚನೆ ನಿದ್ದೆಗೆಡಸಿತು. ಅವಳು ಪದೇ ಪದೇ ನನ್ನನ್ನೆ ನೋಡುವುದು, ಅದೇ ಸ್ಥಳದಲ್ಲಿ ನಿಲ್ಲುವುದು, ಕಾಯುವುದು, ಯಾಕೆ? ಯೋಚಿಸಿದೆ. ಅವಳಿಗೆ ಮಾತನಾಡಲು ಮುಜಗರವೇ. ಇಲ್ಲಾ ನಾನೇ ಮಾತನಾಡಿಸಲಿ ಎಂಬ ಅಭಿಲಾಷೆಯೆ. ಇರಬಹುದು. ನಾನೂ ಮಾತನಾಡಿಸದೇ ತಪ್ಪು ಮಾಡುತ್ತಿರುವೆ. ಮತ್ತೆ ಅದೇ ಸ್ಥಳಕ್ಕೆ ಹೋಗಿ ಕಾಯಬೇಕೆನಸಿತು. ಅಲ್ಲೇ ನಿಂತೆ. ಮಾತನಾಡಿಸಲೇಬೇಕು ಎಂಬ ಕಾತರದಲ್ಲಿ.

  ಅವಳು ಬಂದಳು. ನಾನು ಪರಿಚಯಕ್ಕೆ ಮುಂದಾದೆ. ಅಭಿಮಾನ ನಿರಾಕರಿಸಿತು. ಇಬ್ಬರಲ್ಲೂ ಸಣ್ಣ ಅಹಂಕಾರ ಮತ್ತು ತೃಪ್ತಿಭಾವ. ಅದು ಮಾತಿನಲ್ಲಲ್ಲ. ನೋಟದಲ್ಲಿ. ಅಂತರಂಗದಿ ಹೇಳಬೇಕೆಂದು ಸೋತಿದ್ದು, ಅದೇ ಮೊದಲು. ಅದೇ ಕೊನೆ. ಆಗೀನಿಂದಲೇ ನಮ್ಮಿಬ್ಬರಲ್ಲಿ ಆತ್ಮೀಯತೆ ಆರಂಭವಾಗಿತ್ತು.  ಆದರೆ, ಮಾತು ಹೊರ ಹೊಮ್ಮಲೇ ಇಲ್ಲ. ಯಾವುದೋ ಕಾಲದ ಸೆಳತಕ್ಕೆ ಒಳಗಾಗಿ ಪರಿಚಯದ ಸಮಯವನ್ನು ವ್ಯರ್ಥ ಮಾಡಿದೆ. ಅಂದಿನಿಂದ ಅವಳು ಕಾಣಿಸಲೇ ಇಲ್ಲ.

  ಆದರೆ, ಅವಳೀಗ ಮತ್ತೆ ಕ್ಯಾಂಪಸ್ನಲ್ಲಿ ಕಾಣಿಸಿದ್ದಾಳೆ. ಬಹುದಿನಗಳ ಹಿಂದೆ ಮಿಂಚಿ ಮರೆಯಾದವಳು. ಈಗ ಮನಸ್ಸು ಮತ್ತೆ ಹಳೆಯ ನೆನಪುಗಳನ್ನು ಕೆದಕುತ್ತಿದೆ. ಹೇಗೆ ಮಾತು ಪ್ರಾರಂಭಿಸುವದು ತಿಳಿಯುತ್ತಿಲ್ಲ. ನನ್ನ ಹಾಗೆ ಅವಳಿಗೂ ಅನ್ನಿಸಿರಬಹುದೆ ಎಂಬ ಯೋಚನೆ.   ಹೌದು ಈ ಹರೆಯವೇ ಹೀಗೆ. ಮಾಡಬೇಕಾದ ಸಮಯದಲ್ಲಿ ಮಾಡದೇ, ಹೇಳಬೇಕಾದದ್ದನ್ನು ಹೇಳದೆ ಕಳೆದುಕೊಂಡು ಪಶ್ಚಾತಾಪ ಪಡುತ್ತೇವೆ. ನಂತರ ದುರಂತ ಕಥೆಯ ನಾಯಕನಂತೆ ನಮ್ಮ ಪಾಡಾಗುತ್ತದೆ.
 ಈಗಲಾದರೂ, ಅವಳಿಂದ ಒಂದೇ ಒಂದು ನೋಟ, ಎರಡೇ ಎರಡು ಮಾತು ಬಯಸಿರುವೆ. ಅವಳು ಬರುವ ನಿರೀಕ್ಷೆಯಲ್ಲಿ ಕ್ಯಾಂಪಸ್ನ ಅದೇ ಸ್ಥಳದಲ್ಲಿ ಕಾಯುತ್ತಿರುವೆ.  ಫ್ರೆಂಡ್ಸ್ ನೀವೂ ಅಷ್ಟೆ ಯಾರ ಬಗ್ಗೆ ಏನಾದರೂ ಹೇಳಬೇಕೆನಿಸಿದರೆ ನೇರವಾಗಿ ಹೇಳಿಬಿಡಿ. ಅದು ತಪ್ಪೋ ಸರಿಯೋ ಬೇರೆ ಮಾತು. ಆಗ ಕಷ್ಟವೆನಿಸಿದರು ಮುಂದೆ ನೆಮ್ಮದಿಯಂತೂ ಸಿಗುತ್ತದೆ.
                                         
                         



No comments:

Post a Comment