Thursday, 27 June 2013


ಅವನು ನಮ್ಮೊಂದಿಗಿಲ್ಲ ಕಣ್ಣೀರು ನಿಂತಿಲ್ಲ...


ಆತ ಜರ್ನಲಿಸ್ಟ್ ಆಗಬೇಕು ಅನ್ನೋ ಆಸೆ ಹೊಂದಿದ್ದ. ಗುಲ್ಬಗರ್ಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗಕ್ಕೆ ಸೇರಿದ್ದ. ಸಮೂಹ ಮಾಧ್ಯಮ ಲೋಕದಲ್ಲಿನ ನೂರಾರು ಕನಸುಗಳನ್ನು ಕಂಡಿದ್ದ. ಇದಕ್ಕಾಗಿ ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದ. ಪಾದರಸದಂತಿದ್ದ.  ತನ್ನ ಗೆಳೆಯರೊಂದಿಗೆ  ಉಪನ್ಯಾಸಕರಿಗೆ ಬಹಳ ಆತ್ಮೀಯನಾಗಿದ್ದ.
ಆತ ಮಿತ ಮಾತುಗಾರ. ಯಾರ ಜೊತೆಗೂ ಹೆಚ್ಚಾಗಿ ಮಾತನಾಡಿದವನಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ, ಸುಖಿಯಂತಿದ್ದ. ದಿನಗಳು ಉರಿಳಿದವು. ವರ್ಷವಾಯಿತು. ಈತ ದ್ವಿತೀಯ ವರ್ಷಕ್ಕೆ ಕಾಲಿಟ್ಟ. ವಿಶ್ವವಿದ್ಯಾಲಯಕ್ಕೆ ತನ್ನಂತೆ ಪತ್ರಿಕೋದ್ಯಮದಲ್ಲಿ ಹಲವಾರು ಆಸೆಗಳನ್ನು ಇಟ್ಟುಕೊಂಡ ಬಂದ ವಿದ್ಯಾಥರ್ಿಗಳಿಗೆ ಸ್ವಾಗತ ಕಾರ್ಯಕ್ರಮ ಇಟ್ಟುಕೊಂಡೆವು. ಅದರ ನೇತೃತ್ವ ವಹಿಸಿಕೊಂಡವನು ಆತನೆ. ನಾವು ಮಾಡಬೇಕಾದ ಕಾರ್ಯಗಳನ್ನೆಲ್ಲ ಅವನೊಬ್ಬನೆ ಮಾಡಿದ. ನಾವು ಕೇವಲ ಪ್ರೇಕ್ಷಕ ಗೊಂಬೆಯಾಗಿದ್ದೆವು. ಆ ಕಡೆಗೂ, ಈ ಕಡೆಗೂ ಅವನೆ. ತುಂಬಾ ಉತ್ಸಾಹದಿಂದ ಓಡಾಡಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ. ಅವನು ಅಷ್ಟೆಲ್ಲ ಮಾಡಿದ್ದು ನೋಡಿ ಆಶ್ಚರ್ಯವಾಗಿತ್ತು. ಸಂತೋಷಕ್ಕಾಗಿ, ಕಾರ್ಯಕ್ರಮದ ನೆನಪಿಗಾಗಿ ಅವನೊಂದಿಗೆ ಎಲ್ಲರೂ ಫೊಟೋ ತೆಗೆಸಿಕೊಂಡು ಮನೆಗೆ, ಹಾಸ್ಟೆಲ್ಗಳಿಗೆ ಹಿಂದಿರುಗಿದೆವು.
ಅಂದೇ ಸಂಜೆ ಆತನ ಊರಿನ ಮನೆಯಿಂದ ಕಾಲ್ ಬಂದಿತು. ರಿಸೀವ್ ಮಾಡಿ ಮಾತನಾಡಿದಾಗ 'ಅಜ್ಜನಿಗೆ ಆರಾಮ ಇಲ್ಲ. ಸೀರಿಯಸ್ಸ್ ಬೇಗನೇ ಬಾ' ಎಂದು ತಂಗಿ ಹೇಳಿದಳು. ಇದರಿಂದ ಕೊಂಚ ವಿಚಲಿತನಂತೆ ಕಂಡ ಅವನು ಆ ರಾತ್ರಿನೇ ಹೊರಡಬೇಕೆಂದ. ರಾತ್ರಿ ಬೇಡ ಬೆಳಿಗ್ಗೆ ಹೋಗು ಎಂಬ ಗೆಳೆಯರ ಸಲಹೆಯಂತೆ ಮಾರನೆ ದಿನ ಬೆಳಿಗ್ಗೆ ಐದು ಗಂಟೆಗೆ ತನ್ನ ಸ್ವಂತ ಬೈಕನ್ನೇರಿ ಊರಿಗೆ ಹೋದ. ವಿಶ್ವವಿದ್ಯಾಲಯದಿಂದ ನೂರು ಕಿ.ಮೀ. ಮುಂದೆ ಸಾಗಿದ್ದ. ಆದರೆ ಯಾರು ಊಹಿಸಲಾಗದಂತ ಘಟನೆ ಸಂಭವಿಸಿತ್ತು. ಖಾಸಗಿ ಬಸ್ ಮತ್ತು ಅವನ ಬೈಕ್ ನಡುವೆ ಅಪಘಾತದಿಂದಾಗಿ ವಿಧಿಯ ಆಟಕ್ಕೆ ಅವನು ಬಲಿಯಾದ.
ಈ ವಿಷಯ ಗೊತ್ತಾದ ಗೆಳೆಯರಿಗೆ, ಉಪನ್ಯಾಸಕರಿಗೆ ಒಮ್ಮೇಲೇ ಶಾಕ್! ನಿನ್ನೆ ನಮ್ಮ ಜೊತೆಗೆ ಓಡಾಡಿಕೊಂಡಿದ್ದ. ಇವತ್ತು ಹೀಗೆಲ್ಲ ಎಂದರೆ, ನಂಬಲಾಗಲಿಲ್ಲ. ಆದರೂ ಅದು ನಿಜವಾಗಿತ್ತು. ನಮ್ಮ ಆತ್ಮೀಯ ಸ್ನೇಹಿತ ನಮ್ಮನ್ನಗಲಿದ್ದ. ಎಲ್ಲೆಲ್ಲಿಂದಲೋ ಬಂದವರು. ಒಂದು ವರ್ಷದಲ್ಲಿ ಅದೆಷ್ಟೋ ಅನ್ಯೋನ್ಯ ಮಿತ್ರತ್ವ ಬೆಳೆದಿತ್ತು. ಆ ದುರಂತ ಸಾವು ನಮ್ಮ ಮನಸ್ಸಿನಲ್ಲಿ ಹಚ್ಚಳಿಯದೆ ಉಳಿದಿದೆ. ಒಬ್ಬ ಉತ್ತಮ ಗೆಳೆಯನ ಕಳೆದುಕೊಂಡ ಅನಾಥ ಪ್ರಜ್ಞೆ ನಮ್ಮನ್ನು ಕಾಡುತ್ತಿದೆ. ಆತನ ನಡೆ-ನುಡಿ, ಪ್ರೀತಿ- ವಿಶ್ವಾಸ, ಸ್ನೇಹ ಸಲುಗೆ ನಮ್ಮೊಂದಿಗೆ ಇನ್ನೂ ಜೀವಂತವಾಗಿವೆ.
ನೀನು ನಮ್ಮೊಂದಿಗೆ ಇಲ್ಲದಿದ್ದರೂ, ಆ ದಿನಗಳೆ ಮಾತ್ರ ನೆನಪಾಗಿವೆ ಗೆಳೆಯ ದೊಡ್ಡಬಸಪ್ಪ. ನಿನಗೆ ಪ್ರೀತಿಯ ನಮನಗಳು 

No comments:

Post a Comment