Saturday, 5 January 2013

ಚಿಲುಮೆ...



ಕಾಣದಾಗಿವೆ   ಖಾಲಿ  ಪುಟಗಳು  
ಬಯಸಿದ ಮುದ್ರೆಯನ್ನೋತ್ತಲು 
ಹಣಕೊಟ್ಟು ಕೊಂಡುಕೊಳ್ಳಲು 
ಅಂಗಡಿ-ಮುಗ್ಗಟ್ಟುಗಳಲ್ಲಿ ದೊರೆಯವು 

ಅಡಿಗಡಿಗೂ ಹುಡಿಕಿದೆ 
ನನ್ನತನವ ಮರೆತು 
ಸೊಪ್ಪು ಹಾಕಿದರು ಗಮನಿಸುತ್ತಿಲ್ಲ 
ಸೋಲದಂತಹ ಮನಸ್ಸುಗಳು 

ಕೊನೆಗೂ ಬಯಸಿದೆ ಒಲವನ್ನ 
ಅವಳು ರೂಪವತಿ ಲಾವಣ್ಯವತಿ
ಅಲ್ಲವೇ ಅಲ್ಲ, ನನ್ನಲ್ಲಿ 
ಹೊಸತನ ಚಿಗುರಿಸಿದ ಯುವತಿ 

ಅವಳೊಡನೆ ಬೆಳೆಯಿತು ಸಲುಗೆ 
ಮರೆತು ಸಿಕ್ಕಾಕಿಕೊಂಡೆ ಪ್ರೀತಿಯ ಸುಳಿಗೆ
ಮೊದ-ಮೊದಲು ನಮ್ಮಲ್ಲಿ ಹೊಸತನ 
ನಮ್ಮಿಬ್ಬರ ನಡುವೆ ಅದು ವಿನೂತನ 

ಹಾರ ಬೇಕೆಂದೆವು ಬಾನಗಳದಲ್ಲಿ 
ಹಕ್ಕಿಯಂತೆ...
ಪ್ರೀತಿ ಸಿಂಹಾಸನದ ಒಲುಮೆಯಂತೆ 
ಹರೆಯದ ಚಿಲುಮೆಯಲ್ಲಿ....

No comments:

Post a Comment