Saturday, 5 January 2013
ಹಾಗೆ ಸುಮ್ಮನೆ...
ಪ್ರೀತಿ ಪ್ರೇಮ ಸ್ನೇಹ ನಂಬಿಕೆ
ಪ್ರೀತಿ ಎಂದರೆ ; ಸಂಬಂಧಗಳ ಬೇಸುಗೆ, ಸಮಾಗಮ..
ಪ್ರೇಮ ಎಂದರೆ; ಪ್ರೇಮಿಗಳ ಸಮ್ಮಿಲನ...
ಸ್ನೇಹ ಎಂದರೆ; ಬಿಡಿಸಲಾಗದ ಬಂಧನ...
ನಂಬಿಕೆ ಎಂದರೆ ; ನೋವುನಲಿವುಗಳ ಜೀವನ...
ಬಲುದೂರ...
ದೂರ-ಹತ್ತಿರಗಳ ನಡುವಿನ ಮನಕೆ
ಒಂದಾಗಿ ಸೇರುವ ಬಯಕೆ
ಎರಡು ರೈಲ್ವೇ ಹಳಿಗಳಂತೆ
ಜೊತೆ-ಜೋತೆಯಲ್ಲಿರುವಂತೆ
ಕೂಡುವ ಮನಸ್ಸುಗಳೀಗ
ಬಲುದೂರ ಬಲುದೂರ ಬಲುದೂರ....
ಚೆನ್ನಾ...
ನಿನ್ನ ಮಾತು ಚೆನ್ನ, ಮಾತನಾಡುತ್ತಿರಲು...
ನಿನ್ನ ಮೊಗವು ಚೆನ್ನ, ನಗುತ್ತಿರಲು...
ನಿನ್ನ ನೋಟವು ಚೆನ್ನ, ದೂರವಿರಲು...
ನಿನ್ನ ಪ್ರೀತಿ ಚೆನ್ನ, ಬೆರತಿರಲು...
ಪುಳಕ...
ನಿನ್ನ ಪ್ರೇತಿ ಕಬ್ಬಿನ್ಹಾಲಿನ ನೊರೆ
ಎದುರಿಗೆ ಉಕ್ಕಿತು ಕಾಣದ ಅಕ್ಕರೆ
ನೀ, ನನ್ನೆದುರಿಗಿದ್ದರೆ ರೋಮಾಂಚನ
ಮೈಯಲ್ಲಾ ಪುಳಕದ ಆಲಿಂಗನ.
Subscribe to:
Post Comments (Atom)
No comments:
Post a Comment