ಬೀದಿ ದಾಟುವಾಗ ತಡವರಸಿ
ತಲೆಬಾಗಿ ನೋಡುತ್ತಿದ್ದಿ ನನ್ನಕಡೆ
ಆ ದಿನಗಳ ನಡುವಿರಿಸಿದ
ಆಸೆಗಳಿಗ ನಿಗೂಢ ನಿನ್ನಕಡೆ...
ಮುಲಾಜಿಲ್ಲದೆ ಮುನ್ನುಗ್ಗಿ ಬರುತ್ತಿದ್ದಿ
ಗಾಂಭೀರ್ಯದ ತನ್ಮಯತೆಯಲ್ಲಿ
ಗೋಗರೆದು ಪಿಡಿಸುತಲೇ
ನಿಟ್ಟುಸಿರು ಬಿಡುತ್ತಿದ್ದೆವು ಗುನುಗತಲಿ...
ಜಾಲಾಡುತ್ತಿದ್ದೆ ಮನದಂಗಳವನ್ನ
ಈಗುಳಿದಿರುವುದು ಮಾತ್ರ ಹಳಹಳಕಿ
ಸಮಾಲೋಚಿಸಿ ಸಂಯಮದಿಂದ
ಶಿಪಾರಸ್ಸು ಕಳಿಸಿದ್ದೆ ಸುಮ್ಮಸುಮ್ಮಕ್ಕೆ...
ತರವಲ್ಲದ ವಿನಿಮಯಗಳ
ಮಧ್ಯೆ ಠಿಕಾಣೆ ಹೂದಲೆತ್ನಿಸಿದೆ
ಇನ್ನೇನು ಸರಾಗವಾಗಿ ಸಾಗುತ್ತಿರಲು
ಬಂಧನದ ಬೇಡಿಯ ಕಳಿಚಲೆತ್ನಿಸಿದೆ...
ಪುಟಪುಟಗಳನ್ನು ತಿರುವಿದಂತೆ
ಆ ಸವಿಗನಸುಗಳನೆಲ್ಲ
ಹಿಂಬಾಲಿಸಿದರೂ ಮನದಲ್ಲೀಗ
ನಿಗೂಢ ನಿಗೂಢ ನಿಗೂಢ....
No comments:
Post a Comment